ಜೊತೆ ಜೊತೆಯಲಿ..
ಸುಮಾರು ಒಂದು ತಿಂಗಳ ಹಿಂದೆ ಹೀಗೇ ಒಂದು ದಿವಸ ರೇಡಿಯೊ ಕೇಳ್ತಾ ಇದ್ದಾಗ ಬೆಂಗಳೂರಿನ ಅತ್ಯಂತ ಜನಪ್ರಿಯ ಗೀತೆ ಯಾವುದಿರಬಹುದು ಅನ್ನೊ ಪ್ರಶ್ನೆ ಮನಸ್ಸಿನಲ್ಲಿ ಬಂತು. ಕೇಳುಗರ ಕೋರಿಕೆಯ ಮೇಲೆ ಹಾಡಿನ ಜನಪ್ರಿಯತೆ ನಿರ್ಧಾರ ಮಾಡುವುದಾದರೆ ಗೀತ ಚಿತ್ರದ ‘ಜೊತೆ ಜೊತೆಯಲಿ’ ಹಾಡಿನಷ್ಟು ಜನಪ್ರಿಯ ಗೀತೆ ಬೇರೆ ಇಲ್ಲವೇನೋ. ಸುಮಾರಾಗಿ ಎಲ್ಲ ಚಾನಲ್-ಗಳಲ್ಲಿ ಅತಿ ಹೆಚ್ಚು ಪ್ರಸಾರವಾಗುವ ಹಾಡು ಇದೇ ಇರಬಹುದು. ಹೊಸ ಹಾಡುಗಳು ಬಂದಾಗ ಬಹಳಷ್ಟು ಪ್ರಸಿಧ್ಧಿ ಪಡೆಯಬಹುದು, ಆದರೆ ಕೆಲವು ದಿನಗಳ ನಂತರ ಅವು ಮರೆತು ಹೊಗುತ್ತವೆ. ಸುಮಾರು ಒಂದು ವರ್ಷದ ಹಿಂದೆ ‘ಜರಾ ಜರಾ’ ಹಾಡು ತುಂಬಾ ಪ್ರಸಾರವಾಗುತ್ತಿತ್ತು, ಆದರೆ ಅದನ್ನು ಇತ್ತೀಚೆಗೆ ಕೇಳಿದ ನೆನಪಿಲ್ಲ. ನನಗೆ ತಕ್ಷಣ ನೆನಪಿಗೆ ಬರುವ ಇನ್ನೊಂದು ಜನಪ್ರಿಯ ಹಾಡೆಂದರೆ ಪಲ್ಲವಿ ಅನುಪಲ್ಲವಿ ಚಿತ್ರದ ‘ನಗುವ ನಯನ’. ನಿಮ್ಮ ಪ್ರಕಾರ ನಮ್ಮೂರಿನ ಅತ್ಯಂತ ಜನಪ್ರಿಯ ಗೀತೆ ಯಾವುದು?